Oct 23, 2009

ಪ್ರವಾಹದ ಮಧ್ಯದಲ್ಲಿ

ಈ ಹಿಂದೆಂದು ಹೀಗೆ ಆಗಿರಲಿಲ್ಲ ಆಲ್ವಾ? ನಾವ್ಯಾರು ನೋಡದ ಅಂತಹ ವರುಣನ ಅಬ್ಬರ ಇದು...  ಉತ್ತರ ಕರ್ನಾಟಕದ ಬಯಲು ಸೀಮೆ  ನೀರಿನ ಸಾಗರದಲ್ಲಿ ಮುಳುಗಿತ್ತು! ಅದೆಷ್ಟು ಜನ  ಮನೆ ಮಠ ಆಕಳು ಬೆಳೆ ಕಳೆದು ಜೀವ ಕೈಯಲ್ಲಿ ಹಿಡಿದು ಸಂಕಟ ಪಡುತಿದ್ಧರು… ಹೀಗೆ  ಆಗುತ್ತೆ ಅಂತ ಯಾರಿಗೆ ಗೊತ್ತು? ಈ ಹಿಂದೆಯೂ ಸುನಾಮಿ ಬಂದಾಗ ವಿಪರೀತ ನಷ್ಟ ಆಗಿತ್ತು... ಪ್ರಳಯದ ಒಂದು ಸಂಶ್ಕಿಪ್ತ ಭಿಂಬ ನಮ್ಮ ಮುಂದೆ ಕಾಣಿಸಿಕೊಂಡಿತ್ತು... ನೀವು  ಕೇಳಿರಬಹುದು ಎಂರಿ ಅಂತ ಒಂದು ಸರ್ಕಾರೀ ಸಂಸ್ಥೆ ಇದೆ, ಅಂದರೆ  Emergency Management Research Institute…  ಇದರ ಮುಖ್ಯ  ಉದ್ದೇಶ ತುರ್ತು ಪರಿಸ್ಥಿತಿಯನ್ನು  ಎದರಿಸಲು ಸುಸಜ್ಜಿತ ಯೋಜನೆಯನ್ನು ನಿರ್ಣಮಿಸುವುದು.ಈ ವರೆಗೆ EMRI ನ ಸಾದನೆ ಏನಂದರೆ Dial 108 ಅಮ್ಬುಲೆನ್ಸೆ. ಅದನ್ನ  ಬಿಟ್ಟರೆ ಬೇರೆ ಅವ ಧನಂದರಿ ಸಾಧನೆಯನ್ನು ಮಾಡಿಲ್ಲ...

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅಥವಾ ಸಮಾಜ ಏನು ಮಾಡಬೇಕು? ಪರಿಹಾರ ಧನ ಹೊಂದಿಸ ಬೇಕೇ? ಮನೆ ಕಟ್ಟಿಸಿ ಕೊಡಬೇಕೇ? ಅಥವಾ ಸಂತ್ರಸ್ಥರಿಗೆ ಪರಿಹಾರ ವದಗಿಸಬೇಕೆ? ಮೊದಲಿಗೆ ತುರ್ತು ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಒಂದು ಮುಂಜಗ್ರಿತ ಯೋಜನೆ ರಚಿಸಿ, ಮೊದಲಿಗೆ relief camp ಸಿದ್ದವಗಬೇಕಿತ್ತು, ಸೋಂಕು ತಡೆಯಲು ಪ್ರಾಥಮಿಕ ಚಿಕಿತ್ಸೆ, ತಿನ್ನಲು ಊಟ, ಕುಡಿಯುವ ನೀರು ಈ ಎಲ್ಲ ಸೌಲಭ್ಯ relief camp ನಲ್ಲಿ ಒದಗಿಸಬೇಕಾಗಿತ್ತು... ಕಾಣೆಯಾದವರ ಬಗ್ಗೆ ವಿಚಾರಣ ಕೇಂದ್ರ ತೆಗದು, ದೂರವಾಣಿ ಕೆಲಸ ಮಾಡಿದಲ್ಲಿ, satelite phone ಉಪಯೋಗಿಸ ಬೇಕಿತ್ತು...

St. John's ಆಸ್ಪತ್ರೆ ಒಂದು ಬಿಟ್ರೆ ಬೇರೆ ಯಾರಿಗೂ ಈ relief ಕಂಪಿನ ಯೋಚನೆ ಬರಲೇ ಇಲ್ಲ... ಬೆಂಗಳೂರಿನಲ್ಲಿ ಎಷ್ಟು ವಿಶ್ವ ಖ್ಯಾತಿ ಆಸ್ಪತ್ರೆ ಗಳಿದ್ದು ಏನು ಪ್ರಯೋಜನವಾಯಿತು... ಮನೆ ಕಟ್ಟಲು ಮುಂದಾದ ಉದ್ಯಮಿಗಳು  ಮೂಲಬುತ ಸೌಕರ್ಯ ಒದಗಿಸುವ ಬಗ್ಗೆ ಯಾಕೆ ಚಿಂತೆ ಮಾಡಲೇ ಇಲ್ಲ? ಪ್ರಾಥಮಿಕ ಸೌಲತ್ತು ಇಲ್ಲದೆ ಸಯಿತ್ತಿರುವ ಜನಕ್ಕೆ ಮನೆ ಕಟ್ಟಿ ಕೊಡುವ ಆಶ್ವಾಸನೆ ಏನು ಮಾಡಬಲ್ಲದು? ಇದ್ಯಾವುದು ಒಂದು ದಿನದಲ್ಲಿ ಬದಲಿಸಲು ಸಾದ್ಯವಿಲ್ಲ... ಒಪ್ಪುತ್ತೇನೆ ಆದರೆ ಇದಕ್ಕೆ ನಾಂದಿ ಹಾಡ ಬಹುದು... ಈಗ ಪ್ರಸ್ತಾಪಿಸಿದರೆ ಮುಂದೇ ಈರೆಥಿಯ ಪರಿಸ್ಥಿತಿಗೆ ಸತರ್ಕರಗಿರಬಹುದು. ಇದರ ಮೇಲೆ ಸರ್ಕಾರ/ ಉಧ್ಯೋಗಪಥಿಗಳು /ಸಮಾಜ  ಸೇವಕರು ಗಮನ ಹರಿಸಬೇಕಾಗಿದೆ!



5 comments:

  1. quite agree with you...it was shameful watching the politicians & big guns collecting money for the people when physical presence at the site would have had a much more telling effect on the people of the region...our politicians lost quite a bit in trying to make this 1 more occassion to make money....10K Crores???? that's too huge...we came across several organisations who left at a very short notice to the affected areas to help people...appreciate their effort....will the politicians ever stop thinking of themselves & really work for what they have been selected by the people????

    ReplyDelete
  2. ಸಮಯೋಚಿತ ಲೇಖನ.... ಪ್ರವಾಹ ಹೇಳಿ ಕೇಳಿ ಬರಲ್ಲ ಆಲ್ವಾ? ಎಲ್ಲದಕ್ಕೂ ರೆಡಿಯಾಗಿರ್ಬೇಕು ನಾವು, ನಮ್ಮ ಸರ್ಕಾರ... ಪರಿಹಾರ ನಿಧಿ ಸಗ್ರಹ ಮಾಡಿ ಒಳ್ಳೆ ಕೆಲಸ ಮಾಡತ್ತಾ ಅಂತ ನೋಡ್ತಾ ಇರುವಾಗಲೇ ಈಗ ಅಧಿಕಾರಕ್ಕಾಗಿ ಕಿತ್ತಾಡುತ್ತಾ ಇರೋದನ್ನ ನೋಡಿದ್ರೆ ಜ್ಯಾಡಿಸಿ ಒದೆಯೋಣ ಅನಿಸತ್ತೆ....

    ReplyDelete
  3. ಹಾಯ್ ಹರ್ಷ,
    ಅಬ್ಬ !!!.. ಕೊನೆಗೂ ಕನ್ನಡ ಬ್ಲಾಗ್ ಲೋಕಕ್ಕೆ ಕಾಲಿಟ್ಟಿರಲ್ಲ, ಅಭಿನಂದನೆಗಳು...
    ಮೊದಲ ಲೇಖನವೇ ಉತ್ತಮವಾಗಿದೆ... ಆದರೆ ಕೆಲವೊಂದು ಕಡೆ ಕನ್ನಡ ಲಿಪಿ ಮಾತ್ರ ನಮ್ಮ ಸರಕಾರದಂತೆ ದಾರಿ ತಪ್ಪಿದೆ.. :-)
    ಬಿಡಿ, ನಮ್ಮ ರಾಜಕಾರಣಿಗಳ ಬಗ್ಗೆ ಎಷ್ಟು ಬರೆದರೂ ಅಷ್ಟೆ... "ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ" ಅನ್ನೋ ಹಾಡು ಕೇಳಿಲ್ವೇ ನೀವು?.. ನೀವು ಹೇಳಿದಂತೆ ಎಂರಿ ೧೦೮ ಸೌಲಭ್ಯ ಒದಗಿಸಿದೆ, ಆದರೆ ಅದು ನಗರಗಳಿಗೆ ಮಾತ್ರ ಸೀಮಿತ.. ಮೊನ್ನೆ ತಾನೆ ಅಳದಂಗಡಿಯಲ್ಲಿ ಒಬ್ಬನಿಗೆ ಆಸ್ಪತ್ರೆ ಸೇರಿಸಲು ೧೦೮ ಕ್ಕೆ ಬೆಳಿಗ್ಗೆ ೧೧ ಗಂಟೆಗೆ ಫೋನ್ ಮಾಡಿದರೆ , ಆ ಪುಣ್ಯಾತ್ಮ ಸಂಜೆ ೫ ಕ್ಕೆ ಬಂದು "ಯಾರ್ರಿ ಫೋನ್ ಮಾಡಿದ್ದು? ಏನಾಗಿದೆ?" ಅಂತ ಕೇಳಿದ್ದನ್ನು ನೆನೆಸಿಕೊಂಡು ಜನ ಈಗಲೂ ನಗಬಾರ್ದ ಜಾಗದಿಂದ ನಗುತ್ತಿದ್ದಾರಂತೆ...
    ಏನೇ ಇರಲಿ, ಉತ್ತಮ ಸಮಯೋಚಿತ ಲೇಖನ... ಹೀಗೆ ಬರೆಯುತ್ತಿರಿ...

    ReplyDelete
  4. Thanks for all your comments, ravi will keep it it mind in my next one... which should come out this week end!

    ReplyDelete
  5. ಹರ್ಷ, ನೀವು ಬ್ಲಾಗ್ ಲೋಕಕ್ಕೆ ಕಾಲಿಡುತ್ತಿದ್ದೀರ ಅಂತ ನಿಮ್ಮ ಸ್ನೇಹಿತರು ಹೇಳುವ ಹಾಗೆ ಇರದೇ ನಿಮ್ಮ ಪೋಸ್ಟ್...ಪ್ರಬುದ್ಧವಾಗಿದೆ... ಅಭಿನಂದನೆಗಳು...
    ರಾಜಕಾರಣಿಗಳನ್ನು ಒತ್ತಟ್ಟಿಗಿಟ್ಟು ನಮ್ಮ ಸ್ವಯಂ ಸೇವೀ ಸಂಘಗಳು ಪರಿಹಾರ ಕಾರ್ಯಗಳಿಗೆ ಧುಮುಕಿರುವುದು ಸಮಾಧಾನದ ವಿಷಯ.

    ReplyDelete