ಈ ಹಿಂದೆಂದು ಹೀಗೆ ಆಗಿರಲಿಲ್ಲ ಆಲ್ವಾ? ನಾವ್ಯಾರು ನೋಡದ ಅಂತಹ ವರುಣನ ಅಬ್ಬರ ಇದು... ಉತ್ತರ ಕರ್ನಾಟಕದ ಬಯಲು ಸೀಮೆ ನೀರಿನ ಸಾಗರದಲ್ಲಿ ಮುಳುಗಿತ್ತು! ಅದೆಷ್ಟು ಜನ ಮನೆ ಮಠ ಆಕಳು ಬೆಳೆ ಕಳೆದು ಜೀವ ಕೈಯಲ್ಲಿ ಹಿಡಿದು ಸಂಕಟ ಪಡುತಿದ್ಧರು… ಹೀಗೆ ಆಗುತ್ತೆ ಅಂತ ಯಾರಿಗೆ ಗೊತ್ತು? ಈ ಹಿಂದೆಯೂ ಸುನಾಮಿ ಬಂದಾಗ ವಿಪರೀತ ನಷ್ಟ ಆಗಿತ್ತು... ಪ್ರಳಯದ ಒಂದು ಸಂಶ್ಕಿಪ್ತ ಭಿಂಬ ನಮ್ಮ ಮುಂದೆ ಕಾಣಿಸಿಕೊಂಡಿತ್ತು... ನೀವು ಕೇಳಿರಬಹುದು ಎಂರಿ ಅಂತ ಒಂದು ಸರ್ಕಾರೀ ಸಂಸ್ಥೆ ಇದೆ, ಅಂದರೆ Emergency Management Research Institute… ಇದರ ಮುಖ್ಯ ಉದ್ದೇಶ ತುರ್ತು ಪರಿಸ್ಥಿತಿಯನ್ನು ಎದರಿಸಲು ಸುಸಜ್ಜಿತ ಯೋಜನೆಯನ್ನು ನಿರ್ಣಮಿಸುವುದು.ಈ ವರೆಗೆ EMRI ನ ಸಾದನೆ ಏನಂದರೆ Dial 108 ಅಮ್ಬುಲೆನ್ಸೆ. ಅದನ್ನ ಬಿಟ್ಟರೆ ಬೇರೆ ಅವ ಧನಂದರಿ ಸಾಧನೆಯನ್ನು ಮಾಡಿಲ್ಲ...
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅಥವಾ ಸಮಾಜ ಏನು ಮಾಡಬೇಕು? ಪರಿಹಾರ ಧನ ಹೊಂದಿಸ ಬೇಕೇ? ಮನೆ ಕಟ್ಟಿಸಿ ಕೊಡಬೇಕೇ? ಅಥವಾ ಸಂತ್ರಸ್ಥರಿಗೆ ಪರಿಹಾರ ವದಗಿಸಬೇಕೆ? ಮೊದಲಿಗೆ ತುರ್ತು ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಒಂದು ಮುಂಜಗ್ರಿತ ಯೋಜನೆ ರಚಿಸಿ, ಮೊದಲಿಗೆ relief camp ಸಿದ್ದವಗಬೇಕಿತ್ತು, ಸೋಂಕು ತಡೆಯಲು ಪ್ರಾಥಮಿಕ ಚಿಕಿತ್ಸೆ, ತಿನ್ನಲು ಊಟ, ಕುಡಿಯುವ ನೀರು ಈ ಎಲ್ಲ ಸೌಲಭ್ಯ relief camp ನಲ್ಲಿ ಒದಗಿಸಬೇಕಾಗಿತ್ತು... ಕಾಣೆಯಾದವರ ಬಗ್ಗೆ ವಿಚಾರಣ ಕೇಂದ್ರ ತೆಗದು, ದೂರವಾಣಿ ಕೆಲಸ ಮಾಡಿದಲ್ಲಿ, satelite phone ಉಪಯೋಗಿಸ ಬೇಕಿತ್ತು...
St. John's ಆಸ್ಪತ್ರೆ ಒಂದು ಬಿಟ್ರೆ ಬೇರೆ ಯಾರಿಗೂ ಈ relief ಕಂಪಿನ ಯೋಚನೆ ಬರಲೇ ಇಲ್ಲ... ಬೆಂಗಳೂರಿನಲ್ಲಿ ಎಷ್ಟು ವಿಶ್ವ ಖ್ಯಾತಿ ಆಸ್ಪತ್ರೆ ಗಳಿದ್ದು ಏನು ಪ್ರಯೋಜನವಾಯಿತು... ಮನೆ ಕಟ್ಟಲು ಮುಂದಾದ ಉದ್ಯಮಿಗಳು ಮೂಲಬುತ ಸೌಕರ್ಯ ಒದಗಿಸುವ ಬಗ್ಗೆ ಯಾಕೆ ಚಿಂತೆ ಮಾಡಲೇ ಇಲ್ಲ? ಪ್ರಾಥಮಿಕ ಸೌಲತ್ತು ಇಲ್ಲದೆ ಸಯಿತ್ತಿರುವ ಜನಕ್ಕೆ ಮನೆ ಕಟ್ಟಿ ಕೊಡುವ ಆಶ್ವಾಸನೆ ಏನು ಮಾಡಬಲ್ಲದು? ಇದ್ಯಾವುದು ಒಂದು ದಿನದಲ್ಲಿ ಬದಲಿಸಲು ಸಾದ್ಯವಿಲ್ಲ... ಒಪ್ಪುತ್ತೇನೆ ಆದರೆ ಇದಕ್ಕೆ ನಾಂದಿ ಹಾಡ ಬಹುದು... ಈಗ ಪ್ರಸ್ತಾಪಿಸಿದರೆ ಮುಂದೇ ಈರೆಥಿಯ ಪರಿಸ್ಥಿತಿಗೆ ಸತರ್ಕರಗಿರಬಹುದು. ಇದರ ಮೇಲೆ ಸರ್ಕಾರ/ ಉಧ್ಯೋಗಪಥಿಗಳು /ಸಮಾಜ ಸೇವಕರು ಗಮನ ಹರಿಸಬೇಕಾಗಿದೆ!